ಗ್ರಂಥಾಲಯದ ಸದಸ್ಯತ್ವ
ಸ್ನಾತಕೋತ್ತರ ವಿದ್ಯಾರ್ಥಿಗಳು
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸ್ನಾತಕೋತ್ತರ ವಿಭಾಗಗಳಲ್ಲಿ ಅಭ್ಯಸಿಸುತ್ತಿರುವ ಸ್ನಾತಕೋತ್ತರ ವಿದ್ಯಾರ್ಥಿಗಳು ಗ್ರಂಥಾಲಯದ ಸದಸ್ಯತ್ವಕ್ಕಾಗಿ ನಿಗದಿತ ನಮೂನೆಯಲ್ಲಿ ಅರ್ಜಿ (ಸದಸ್ಯತ್ವ ಅರ್ಜಿ ನಮೂನೆಗಾಗಿ ಇಲ್ಲಿ ಒತ್ತಿ) ಸಲ್ಲಿಸಬೇಕು ಮತ್ತು ಅರ್ಜಿಯ ಜೊತೆಗೆ ಆಧಾರ ಕಾರ್ಡ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.
Ph.D ವಿದ್ಯಾರ್ಥಿಗಳು
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸಂಶೋಧನೆಗಾಗಿ ನೊಂದಾಯಿಸಿದ ಸಂಶೋಧನಾ ವಿದ್ಯಾರ್ಥಿಗಳು ಗ್ರಂಥಾಲಯದ ಸದಸ್ಯತ್ವಕ್ಕಾಗಿ ನಿಗದಿತ ನಮೂನೆಯಲ್ಲಿ ಅರ್ಜಿ (ಸದಸ್ಯತ್ವ ಅರ್ಜಿ ನಮೂನೆಗಾಗಿ ಇಲ್ಲಿ ಒತ್ತಿ) ಸಲ್ಲಿಸಬೇಕು ಮತ್ತು ಅರ್ಜಿಯ ಜೊತೆಗೆ ಕಡ್ಡಾಯವಾಗಿ ಆಧಾರ ಕಾರ್ಡ ಪ್ರತಿಯನ್ನು ಲಗತ್ತಿಸಬೇಕು.
ಸಂದರ್ಶಕರು
ಬೇರೆ ವಿಶ್ವವಿದ್ಯಾಲಯದ ಸಂಶೋಧಕರು/ಸ್ನಾತಕೋತ್ತರ ವಿದ್ಯಾರ್ಥಿಗಳು ಗ್ರಂಥಪಾಲಕರ ಅನುಮತಿ ಪತ್ರದೊಂದಿಗೆ (ಅರ್ಜಿ ನಮೂನೆಗಾಗಿ ಇಲ್ಲಿ ಒತ್ತಿ) ಗ್ರಂಥಾಲಯವನ್ನು ಉಪಯೋಗಿಸಬಹುದು. ಅರ್ಜಿಯ ಜೊತೆಗೆ ಗುರುತಿನ ಪತ್ರದ ಪ್ರತಿಯನ್ನು (ಆಧಾರ ಕಾರ್ಡ, PAN ಕಾರ್ಡ, Voter ID etc.) ಲಗತ್ತಿಸಬೇಕು.
ಸಿಬ್ಬಂದಿಗಳು
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಗ್ರಂಥಾಲಯದ ಸದಸ್ಯತ್ವಕ್ಕಾಗಿ ತಮ್ಮ ವಿಭಾಗದ ಮುಖ್ಯಸ್ಥರ ಮೂಲಕ ಗ್ರಂಥಪಾಲಕರಿಗೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿಯ ಜೊತೆಗೆ ತಮ್ಮ ನೇಮಕಾತಿ ಆದೇಶದ ಪ್ರತಿಯನ್ನು ಲಗತ್ತಿಸಬೇಕು.