ವಿಭಿನ್ನ ಸಾಮರ್ಥ್ಯದ ಬಳಕೆದಾರರಿಗೆ
ವಿಭಿನ್ನ ಸಾಮರ್ಥ್ಯದ ಓದುಗರಿಗಾಗಿ ಅವಶ್ಯವಿರುವ ಈ ಕೆಳಗಿನ ಸಹಾಯಕ ಉಪಕರಣಗಳನ್ನು ಪೆÇ್ರ.ಶಿ.ಶಿ. ಬಸವನಾಳ ಗ್ರಂಥಾಲಯದಲ್ಲಿ ವಿಶೇಷವಾದ ಕೊಠಡಿಯಲ್ಲಿ ಒದಗಿಸಲಾಗಿದೆ.
ಕ್ರ. ಸಂ. |
ಸಾಧನದ ಹೆಸರು |
1 |
ZoomEx ಪಠ್ಯ ಪಠಣಕ

ಇದು ಕಂಪ್ಯೂಟರ್ ಆಧಾರಿತವಾಗಿದ್ದು ಸರಳ ಉಪಕರಣವಾಗಿರುತ್ತದೆ ಕ್ಯಾಮರಾ ಮತ್ತು ಸ್ಕ್ಯಾನರ್ ಅನ್ನು ಒಳಗೊಂಡಿದೆ ಮೊಷನ್ ಸೆನ್ಸರ್ ಹೊಂದಿದ್ದು ಪಠ್ಯವನ್ನು ಸ್ಪಷ್ಟವಾಗಿ ಭಾರತೀಯ ಇಂಗ್ಲೀಷ ಉಚ್ಛಾರಣೆಯಲ್ಲಿ ಓದುತ್ತದೆ.
|
2 |
Kurzweil K1000 ಸ್ಕ್ಯಾನಿಂಗ್ ಮತ್ತು ರೀಡಿಂಗ್ ತಂತ್ರಾಂಶ

ಈ ತಂತ್ರಾಂಶವು ಕಂಪ್ಯೂಟರನ್ನು ಸ್ಕ್ಯಾನಿಂಗ್ ಹಾಗೂ ಓದುವ ಯಂತ್ರವನ್ನಾಗಿಸುತ್ತದೆ. ಮಂದ ದೃಷ್ಟಿ ಇರುವವರಿಗೆ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಓದುತ್ತದೆ.
|
3 |
Plex Talk PTN2 ಮಾತನಾಡುವ ಡೈಸಿ ಪ್ಲೇಯರ್

ಇದರ ಸಹಾಯದಿಂದ DAISY ಪುಸ್ತಕಗಳನ್ನು ಅಥವಾ ಇ-ಪುಸ್ತಕಗಳನ್ನು ಸ್ಪಷ್ಟವಾಗಿ ಓದುತ್ತದೆ. ವಿವಿಧ ಸಂಗ್ರಾಹಕಗಳಾದ CD, SD cards, USB Pendrive ಗಳಲ್ಲಿ ಇರುವ ಇ-ಪುಸ್ತಕಗಳನ್ನು ಶಬ್ದ ರೂಪದಲ್ಲಿ ಪರಿವರ್ತಿಸಿ ಓದುತ್ತದೆ.
|
4 |
JAWS ಮಾತನಾಡುವ ತಂತ್ರಾಂಶ.

JAWS ತಂತ್ರಾಂಶದಿಂದ ಯಾವುದೆ ಕಂಪ್ಯೂಟರನ್ನು ಓದುವ ಕಂಪ್ಯೂಟರನ್ನಾಗಿಸಬಹುದು. ದೃಷ್ಟಿ ರಹಿತ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದು, ಕಂಪ್ಯೂಟರ್ windows ತಂತ್ರಾಂಶದಲ್ಲಿರುವಯಾವುದೇ ಉಪತಂತ್ರಾಂಶಗಳನ್ನು ಉಪಯೋಗಿಸಬಹುದಾಗಿದೆ.
|
5 |
Magic ಕಂಪ್ಯೂಟರ್ ಪರದೆ ವರ್ಧಕ ಮತ್ತು ಪಠಣಕ

ಈ ತಂತ್ರಾಂಶವು ಕಂಪ್ಯೂಟರ್ ಪರದೆಯನ್ನು 36 ಪಟ್ಟು ವರ್ದಿಸುತ್ತದೆ ಇದರಿಂದ ಅಲ್ಪ ದೃಷ್ಟಿ ದೋಷ ಇರುವ ವಿದ್ಯಾರ್ಥಿಗಳನ್ನು ಸ್ವತಂತ್ರವಾಗಿ ಕಂಪ್ಯೂಟರ್‍ನ್ನು ಉಪಯೋಗಿಸಲು ಸಮರ್ಥರನ್ನಾಗಿಸುತ್ತದೆ.
|
6 |
Lex instant ತ್ವರಿತ ಪಠಣಕ ಮತ್ತು ಸ್ಕ್ಯಾನರ್

ಇದು ಮುದ್ರಿತ ಪುಸ್ತಕಗಳನ್ನು ವೇಗವಾಗಿ ಓದುತ್ತದೆ ಪ್ರತಿ ನಿಮಿಷಕ್ಕೆ ಸುಮಾರು 20 ಪುಟಗಳನ್ನು ಓದುತ್ತದೆ. ಪುಸ್ತಕ ಪುಟಗಳ ಸ್ಪಷ್ಟವಾದ ಚಿತ್ರವನ್ನು ಸೆರೆಹಿಡಿದು ಅದರ ಬಣ್ಣ/ಹಿನ್ನೆಲೆ ಚಿತ್ರವನ್ನು ಬದಲಾಯಿಸುತ್ತದೆ. ವಿಸ್ತೃತ ಆರು ಮಾದರಿಗಳಲ್ಲಿ ನೋಡಬಹುದಾಗಿದೆ. ಪಠ್ಯವನ್ನು ತ್ವರಿತವಾಗಿ MP3, MS Word ಅಥವಾ PDF ಕಡತವಾಗಿ ಸಂಗ್ರಹಿಸಬಹುದಾಗಿದೆ.
|