FAQ
ಈ ಕೆಳಗೆ ನೀಡಿದ ಪ್ರಶ್ನೋತ್ತರ ಮಾಲಿಕೆಯು ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ಇಲ್ಲದಿದ್ದರೆ ಗ್ರಂಥಾಲಯದ ಪರಿಚಲನಾ ವಿಭಾಗದ ಸಿಬ್ಬಂದಿಯನ್ನು ಭೆಟ್ಟಿ ಮಾಡುವುದು ಮತ್ತು ಗ್ರಂಥಾಲಯದ ಜಾಲತಾಣವನ್ನು ಸಮಗ್ರವಾಗಿ ಪರಿಶೀಲಿಸುವುದು.
- ಗ್ರಂಥಾಲಯಕ್ಕೆ ಯಾರು ಸದಸ್ಯರಾಗಬಹುದು? ಉತ್ತರ: ಈ ಕೆಳಗೆ ಕಾಣಿಸಿದವರು ಗ್ರಂಥಾಲಯಕ್ಕೆ ಸದಸ್ಯರಾಗಬಹುದು (ಅ) ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ Ph.D ಹಾಗೂ P.G. ವಿದ್ಯಾರ್ಥಿಗಳು. (ಬ) ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ.
- ಪೆÇ್ರ.ಶಿ.ಶಿ.ಬಸವನಾಳ ಗ್ರಂಥಾಲಯಕ್ಕೆ ಸದಸ್ಯರಾಗುವ ಪ್ರಕ್ರಿಯೆ ಏನಿದೆ? ಉತ್ತರ: ಆಸಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗ್ರಂಥಾಲಯದ ಪರಿಚಲನ ವಿಭಾಗಕ್ಕೆ ಕಾರ್ಯಾವಧಿಯಲ್ಲಿ ಅಂದರೆ ಬೆಳಿಗ್ಗೆ 8.00 ರಿಂದ ಸಾಯಂಕಾಲ 7.00 ಗಂಟೆ ಅವಧಿಯಲ್ಲಿ ಭೆಟ್ಟಿಯಾಗಿ ನಿರ್ಧಿಷ್ಟಪಡಿಸಿದ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸುವುದು. ಅರ್ಜಿಯ ಮೇಲೆ ಅಧ್ಯಯನ ಮಾಡುತ್ತಿರುವ ವಿಭಾಗದ ಮುಖ್ಯಸ್ಥರ ಸೀಲು ಹಾಗೂ ಸಹಿ ಹಾಕಿಸಿರಬೇಕು ಮತ್ತು ವಿಭಾಗದ ಪ್ರವೇಶಕ್ಕೆ ನೀಡಿದ ಫೀ ತುಂಬಿದ ಚಲನ ಪ್ರತಿ, ಆಧಾರ ಕಾರ್ಡನ ಪ್ರತಿ ಮತ್ತು ಭಾವ ಚಿತ್ರದ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.
- ಸದಸ್ಯತ್ವದ ಅರ್ಜಿಯನ್ನು ಎಲ್ಲಿಂದ ಪಡೆಯಬೇಕು? ಉತ್ತರ: ಸದಸ್ಯತ್ವದ ನಿಗದಿತ ಅರ್ಜಿಯ ನಮೂನೆಯನ್ನು ಗ್ರಂಥಾಲಯದ ಪರಿಚಲನ ವಿಭಾಗದ ಕೌಂಟರ್‍ನಿಂದ ಪಡೆಯಬಹುದು ಅಥವಾ ಗ್ರಂಥಾಲಯದ ಜಾಲತಾಣದಲ್ಲಿಂದ ಡೌನಲೋಡ ಮಾಡಿಕೊಂಡು ಮುದ್ರಿಸಿಕೊಳ್ಳಬಹುದು. ಪ್ರತಿ ವರ್ಷ ವಿದ್ಯಾರ್ಥಿಗಳು ನಿಗದಿ ಪಡಿಸಿದ ದಿನಾಂಕದೊಳಗೆ ಸದಸ್ಯತ್ವವನ್ನು ಉಚಿತವಾಗಿ ಪಡೆಯಬಹುದು ನಂತರ ರೂ. 50/- ಗಳನ್ನು ಪಾವತಿಸಿ ಸದಸ್ಯತ್ವ ಪಡೆಯಬಹುದು.
- ಪುಸ್ತಕ ಎರವಲು ಕಾರ್ಡಗಳನ್ನು ಹೇಗೆ ಪಡೆಯುವದು? ಉತ್ತರ: ಪ್ರತಿ ಎರವಲು ಕಾರ್ಡಿಗೆ ರೂ. 200/- ಗಳನ್ನು ಠೇವಣಿ ಇರಿಸಿ ಪಡೆಯಬಹುದು ವರ್ಷದ ಕೊನೆಗೆ ನಿಗದಿತ ದಿನಾಂಕದ ಒಳಗಾಗಿ ಠೇವಣಿ ಹಣವನ್ನು ಮರಳಿಸುವಂತೆ ಅರ್ಜಿ ಸಲ್ಲಿಸಿ ಠೇವಣಿ ಹಣವನ್ನು ಮರಳಿ ಪಡೆಯಬಹುದು.
- ಎಷ್ಟು ಪುಸ್ತಕಗಳನ್ನು ಎರವಲು ಪಡೆಯಬಹುದು? ಉತ್ತರ: ಒಂದು ಎರವಲು ಚೀಟಿಗೆ ಒಂದು ಪುಸ್ತಕವನ್ನು ಎರವಲು ನೀಡಲಾಗುವದು. ವಿವಿಧ ಓದುಗರ ವರ್ಗಕ್ಕೆ ನೀಡಲಾಗುವ ಎರವಲು ಪುಸ್ತಕಗಳು ಸಂಖ್ಯೆ ಈ ಕೆಳಗಿನಂತಿದೆ.
ಓದುಗರ ವರ್ಗ |
ಪುಸ್ತಕಗಳ ಸಂಖ್ಯೆ |
ಸ್ನಾತಕೋತ್ತರ ವಿದ್ಯಾರ್ಥಿಗಳು (ಸಾಮಾನ್ಯ) |
2 |
ಸ್ನಾತಕೋತ್ತರ ವಿದ್ಯಾರ್ಥಿಗಳು SC/ST/Cat-I |
3 |
ಸಂಶೋಧನಾ ವಿದ್ಯಾರ್ಥಿಗಳು |
5 |
ಸಹಾಯಕ ಪ್ರಾಧ್ಯಾಪಕರು |
15 |
ಸಹ ಪ್ರಾಧ್ಯಾಪಕರು |
20 |
ಪ್ರಾಧ್ಯಾಪಕರು |
25 |
- ಪುಸ್ತಕವನ್ನು ಎರವಲು ಪಡೆಯುವ ಪ್ರಕ್ರಿಯೆ ಎನು? ಉತ್ತರ: ಗ್ರಂಥಾಲಯದ ಪುಸ್ತಕ ಸಂಗ್ರಹಕ್ಕೆ ಹೋಗಿ ನಿಮಗೆ ಬೇಕಾದ ಪುಸ್ತಕವನ್ನು ತೆಗೆದುಕೊಂಡು ಪರಿಚಲನಾ ವಿಭಾಗದಲ್ಲಿ ನಿಮಗೆ ನೀಡಿರುವ ಎರವಲು ಕಾರ್ಡ ಜೊತೆಗೆ ಸಲ್ಲಿಸಬೇಕು. ಸಿಬ್ಬಂದಿಗೆ ನಿಮ್ಮ ಗುರುತಿನ ಕಾರ್ಡನ್ನು ತೋರಿಸಿ. ಒಂದು ಎರವಲು ಕಾರ್ಡಿಗೆ ಒಂದು ಪುಸ್ತಕ ಎರವಲು ನೀಡಲಾಗುವದು. ಎರವಲು ಪಡೆಯುವ ಪುಸ್ತಕದ ಹಿಂಬಾಗದ ಪುಟದಲ್ಲಿ ಪುಸ್ತಕ ಮರಳಿಸಬೇಕಾದ ದಿನಾಂಕ ನಮೂದಿಸಿ ಎರವಲು ನೀಡುತ್ತಾರೆ.
- ಗುರುತಿನ ಕಾರ್ಡ ಅಥವಾ ಎರವಲು ಕಾರ್ಡಗಳನ್ನು ಕಳೆದುಕೊಂಡರೆ ಏನು ಮಾಡಬೇಕು? ಉತ್ತರ: ನಕಲು ಪ್ರತಿಗಾಗಿ ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ಸಲ್ಲಿಸಿರಿ ಮತ್ತು ಕಳೆದುಕೊಂಡ ಪ್ರತಿ ಕಾರ್ಡಿಗೆ ರೂ. 50/- ಗಳನ್ನು ಪಾವತಿಸಬೇಕಾಗುವದು.
- ಹೊರಗಿನವರು ಗ್ರಂಥಾಲಯವನ್ನು ಉಪಯೋಗಿಸಬಹುದೆ? ಉತ್ತರ: (a) ಹೌದು ಅತಿಥಿ ಓದುಗರಾಗಿ ಗ್ರಂಥಾಲಯವನ್ನು ಉಪಯೋಗಿಸಬಹುದು. ಅತಿಥಿ ಓದುಗರು ತಮ್ಮ ಗುರುತಿನ ಕಾರ್ಡನ್ನು ತೋರಿಸಬೇಕಾಗುವುದು (ಆಧಾರ/PAN ಇತರೆ). ಮತ್ತು ಅತಿಥಿ ಓದುಗರ ಫೀ ಯನ್ನು ಈ ಕೆಳಗಿನಂತೆ ಪಾವತಿಸಬೇಕಾಗುವದು. ಒಂದು ದಿನಕ್ಕೆ ರೂ. 25/- ಒಂದು ವಾರಕ್ಕೆ ರೂ. 100/- ಹದಿನೈದು ದಿನಗಳಿಗೆ ರೂ. 200/- ಒಂದು ತಿಂಗಳಿಗೆ ರೂ. 300/- (b) ವಿಶ್ವವಿದ್ಯಾಲಯದ ಸಂಲಗ್ನ (constituent) ಮಹಾವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಮಹಾವಿದ್ಯಾಲಯದ ಗುರುತಿನ ಕಾರ್ಡ ತೋರಿಸಿ ಗ್ರಂಥಾಲಯವನ್ನು ಉಪಯೋಗಸಬಹುದು.
- ಗ್ರಂಥಾಲಯದ ಪುಸ್ತಕಗಳನ್ನು ಎರವಲು ಪಡೆವ/ಮರಳಿಸುವ ವೇಳೆ ಯಾವುದು? ಉತ್ತರ: ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8.30 ರಿಂದ ಸಾಯಂಕಾಲ 5.30 ಗಂಟೆವರಗೆ ಶನಿವಾರದಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 5.30 ಗಂಟೆವರೆಗೆ ಗ್ರಂಥಾಲಯವು ರವಿವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ತೆರೆದಿರುವುದಿಲ್ಲ.
- OPAC ಎಂದರೇನು? ಉತ್ತರ: OPAC ನ ವಿಸ್ತೃತ ರೂಪ ‘Open Public Access Catalog’ ಇದೊಂದು ಗಣಕಿಕೃತ ಡಾಟಾಬೆಸ್ ಇದರಲ್ಲಿ ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳ ಮಾಹಿತಿ ಇರುತ್ತದೆ ಇದನ್ನು ಉಪಯೋಗಿಸಿ ಪುಸ್ತಕದ ಹೆಸರು, ಲೇಖಕರ ಹೆಸರು, ವಿಷಯ, ಪ್ರತಿನಿಧಿತ ಶಬ್ದಗಳ ಮೂಲಕ ಹುಡುಕಬಹುದಾಗಿದೆ.
- ಕವಿವಿ ಗ್ರಂಥಲಾಯದ ಬಳಕೆದಾರರಿಗೆ ಯಾವ ಯಾವ e-ಗ್ರಂಥಗಳು ಲಭ್ಯ ಇರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಉತ್ತರ: ಗ್ರಂಥಾಲಯದ ಜಾಲತಾಣಕ್ಕೆ ಭೆಟ್ಟಿ ನೀಡಿ ಸಂಪನ್ಮೂಲಗಳು ‘(Resources)’ ಎಂಬುದನ್ನು ಒತ್ತಿರಿ ನಂತರ ಉಪ ಪಟ್ಟಿಯಲ್ಲಿ ಇ-Books ಎಂಬುದನ್ನು ಆಯ್ದುಕೊಳ್ಳಿ ಆಗ ನಿಮಗೆ ಇ-Books ಗಳ ಪಟ್ಟಿ ತೆರೆದುಕೊಳ್ಳುತ್ತದೆ.
- ನನ್ನ ಸ್ವಂತ ಪುಸ್ತಕಗಳನ್ನು ಗ್ರಂಥಾಲಯದ ಒಳಗೆ ತೆಗೆದುಕೊಂಡು ಹೋಗಬಹುದೆ? ಉತ್ತರ: ಇಲ್ಲ, ಗ್ರಂಥಾಲಯದ ಒಳಗೆ ಸ್ವಂತ ವೈಯಕ್ತಿಕ ಪುಸ್ತಕಗಳನ್ನು ತೆಗೆದುಕೊಂಡು ಹೋಗುವುದನ್ನು ಪ್ರತಿಬಂಧಿಸಲಾಗಿದೆ, ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳನ್ನು ಬಳಸಬೇಕು ಮತ್ತು ನಿಮ್ಮ ಸ್ವಂತ ವೈಯಕ್ತಿಕ ಪುಸ್ತಕಗಳನ್ನು ‘Property Counter’ ನಲ್ಲಿ ಇಟ್ಟು ಬರಬೇಕು.
- ನನಗೆ ಬೇಕಾದ ಪುಸ್ತಕ ಗ್ರಂಥಾಲಯದ ಶೆಲ್ಫಗಳ ಮೇಲೆ ಇರದಿದ್ದರೆ ಎನು ಮಾಡಬೇಕು? ಉತ್ತರ: ಮೊದಲು ಆ ಸ್ಥಳದಲ್ಲಿ ಪುಸ್ತಕಗಳನ್ನು ಹೊಂದಿಸಿ ಇಡುವ ಗ್ರಂಥಾಲಯದ ಸಿಬ್ಬಂದಿಯನ್ನು ಸಂಪರ್ಕಿಸಿ, ಹಾಗೆ ದೊರಕದಿದ್ದರೆ ಪರಿಚಲನ ವಿಭಾಗದ ಕೌಂಟರ್‍ನಲ್ಲಿ ವಿಚಾರಿಸಿ.
- ಗ್ರಂಥಾಲಯದ ಎರವಲು ಪಡೆದ ಪುಸ್ತಕವನ್ನು ಅತಿ ಹೆಚ್ಚು ಅಂದರೆ ಎಷ್ಟು ದಿನದವರೆಗೆ ಇಟ್ಟುಕೊಳ್ಳಬಹುದು. ಉತ್ತರ: ಸ್ನಾತಕೋತ್ತರ ವಿದ್ಯಾರ್ಥಿಗಳು 10 ದಿನಗಳವರೆಗೆ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು 30 ದಿನಗಳವರೆಗೆ ಗ್ರಂಥಾಲಯದ ಪುಸ್ತಕವನ್ನು ಇಟ್ಟುಕೊಳ್ಳಬಹುದು ಮತ್ತು ಪುಸ್ತಕವನ್ನು ಎರವಲು ನೀಡುವ ವೇಳೆ ಗ್ರಂಥಾಲಯದ ಸಿಬ್ಬಂದಿ ಪುಸ್ತಕವನ್ನು ಮರಳಿಸಬೇಕಾದ ದಿನಾಂಕವನ್ನು ಪುಸ್ತಕದ ಹಿಂಬದಿಯ ಪುಟದಲ್ಲಿ ನಮೂದಿಸಿರುತ್ತಾರೆ.
- ಈಗಾಗಲೇ ಎರವಲು ಪಡೆದ ಪುಸ್ತಕವನ್ನು ಮತ್ತೆ ಎರವಲು ಪಡೆಯಲು ನವೀಕರಿಸುವುದು ಹೇಗೆ? ಉತ್ತರ: ಎರವಲು ಪಡೆದ ಪುಸ್ತಕವನ್ನು ಗ್ರಂಥಾಲಯದ ಎರವಲು ಕೌಂಟರ್‍ನಲ್ಲಿ ಸಲ್ಲಿಸಿ ಪುನಃ ಎರವಲು ಪಡೆಯಬಹುದು.
- ಒಂದು ಪುಸ್ತಕದ ಎರವಲನ್ನು ಎಷ್ಟು ಬಾರಿ ನವೀಕರಿಸಿಕೊಳ್ಳಬಹುದು? ಉತ್ತರ: ಸ್ನಾತಕೋತ್ತರ ವಿದ್ಯಾರ್ಥಿಗಳಿಂದು ಮೂರು ಸಲ ನವೀಕರಿಸಿಕೊಳ್ಳಬಹುದು.
- ಎರವಲು ಪಡೆದ ಪುಸ್ತಕವನ್ನು ನಿಗದಿತ ದಿನಾಂಕದೊಳಗೆ ಗ್ರಂಥಾಲಯಕ್ಕೆ ಮರಳಿಸದಿದ್ದರೆ ದಂಡ ಪಾವತಿಸಬೇಕೆ? ಉತ್ತರ: ಹೌದು, ನಿಗದಿತ ದಿನಾಂಕದ ನಂತರ ತಡವಾದ ಪ್ರತಿ ದಿನಕ್ಕೆ ಪ್ರತಿ ಪುಸ್ತಕಕ್ಕೆ ಒಂದು ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.
- ಗ್ರಂಥಾಲಯದ ದಂಡದ ಮೊತ್ತವನ್ನು ಎಲ್ಲಿ ಪಾವತಿಸಬೇಕು? ಉತ್ತರ: ಗ್ರಂಥಾಲಯದ ಪರಿಚಲನ ವಿಭಾಗದ ಕೌಂಟರ್‍ನಲ್ಲಿ ದಂಡದ ಹಣವನ್ನು ನಗದಾಗಿ ಪಾವತಿಸಿ ರಸಿದಿ ಪಡೆಯಬೇಕು.
- ನಿಯತಕಾಲಿಕೆಗಳನ್ನು ಒಂದು ದಿನದ ಮಟ್ಟಿಗೆ ಅಥವಾ ಕೆಲವೇ ದಿನಗಳವರೆಗೆ ಎರವಲು ಪಡೆಯಬಹುದೆ? ಉತ್ತರ: ಇಲ್ಲ. ನಿಯತಕಾಲಿಕೆಗಳನ್ನು ಎರವಲು ಪಡೆಯಲು ಆಗುವುದಿಲ್ಲ.
- ಪರಾಮರ್ಶನ ವಿಭಾಗದಲ್ಲಿ ಯಾವ ತರಹದ ಪುಸ್ತಕಗಳು ಇರುತ್ತವೆ. ಉತ್ತರ: ಪರಾಮರ್ಶನ ವಿಭಾಗದಲ್ಲಿ ವಿಶ್ವಕೋಶಗಳು, ಶಬ್ದಕೋಶಗಳು, ಕೈಪಿಡಿಗಳು, ಡೈರೆಕ್ಟರಿಗಳು, ಕಂಪ್ಯೂಟರ್ C.D. ಗಳು ಹಾಗೂ ಅಮೂಲ್ಯವೆನಿಸುವ ಕೆಲವು ಪುಸ್ತಕಗಳು ಇರುತ್ತವೆ.
- ಪರಾಮರ್ಶನ ಗ್ರಂಥಗಳನ್ನು ಎರವಲು ಪಡೆಯಬಹುದೆ? ಉತ್ತರ: ಇಲ್ಲ, ಪರಾಮರ್ಶನ ಗ್ರಂಥಗಳನ್ನು ಗ್ರಂಥಾಲಯದ ಓದುವ ಕೊಠಡಿಯಲ್ಲಿಯೇ ಪರಾಮರ್ಶಿಸಬೇಕು, ಎರವಲು ನೀಡುವುದಿಲ್ಲ.
- ಪಿಹೆಚ್.ಡಿ/ಡೆಸರ್ಟೇಶನ್ ಪ್ರಬಂಧಗಳನ್ನು ಪರಾಮರ್ಶಿಸಬಹುದೆ? ಉತ್ತರ: ವಿಶ್ವವಿದ್ಯಲಾಯದ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ನಿಯತಕಾಲಿಕೆ ವಿಭಾಗದಲ್ಲಿ ಸಂಗ್ರಹಿಸಲಾದ ಪಿಹೆಚ್.ಡಿ ಪ್ರಬಂಧಗಳನ್ನು ಪರಾಮರ್ಶಿಸಬಹುದು ಮತ್ತು ‘INFLIBNET Shodhganga’ ಜಾಲತಾಣದಲ್ಲಿ ಪೂರ್ಣ ಪಠ್ಯದೊಂದಿಗೆ ಲಭ್ಯವಿರುತ್ತವೆ.
- ಪಿಹೆಚ್.ಡಿ. ಪ್ರಬಂಧ/ಡೆಸರ್ಟೆಶನ್‍ಗಳನ್ನು ಎರವಲು ಪಡೆಯಬಹುದೇ? ಉತ್ತರ: ಇಲ್ಲ. ಅವುಗಳನ್ನು ಎರವಲು ನೀಡುವುದಿಲ್ಲ.
- ಎರವಲು ಪಡೆದ ಪುಸ್ತಕವನ್ನು ಕಳೆದುಕೊಂಡರೆ ಏನು ಮಾಡಬೇಕು? ಉತ್ತರ: ಸಾಧ್ಯವಾದಷ್ಟು ಕಳೆದುಕೊಂಡ ಪುಸ್ತಕದ ಅದೇ ಆವೃತ್ತಿ/ಹೊಸ ಆವೃತ್ತಿಯ (edition) ಹೊಸ ಪ್ರತಿಯನ್ನು ಗ್ರಂಥಾಲಯಕ್ಕೆ ಸಲ್ಲಿಸಬೇಕು. ಒಂದು ವೇಳೆ ಮಾರುಕಟ್ಟೆಯಲ್ಲಿ ಆ ಪುಸ್ತಕ ಸಿಗದಿದ್ದರೆ ಕಳೆದ ಪುಸ್ತಕದ ಮುಖ ಬೆಲೆಯ ಆರು ಪಟ್ಟು ಅಥವಾ ರೂ. 1,000/- ಯಾವುದು ಹೆಚ್ಚು ಅದನ್ನು ಪಾವತಿಸಬೇಕು.
- ಓದುಗರು ಗ್ರಂಥಾಲಯಕ್ಕೆ ಪುಸ್ತಕವನ್ನು ಖರೀದಿಸಲು ಶಿಫಾರಸು ಮಾಡಬಹುದೆ? ಉತ್ತರ: ಹೌದು, ನೀವು ಗ್ರಂಥಾಲಯಕ್ಕೆ ಪುಸ್ತಕದ ಶಿಫಾರಸನ್ನು ನಿಮ್ಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರ ಮೂಲಕ ಗ್ರಂಥಾಲಯಕ್ಕೆ ಸಲ್ಲಿಸಬಹುದು. ಇದನ್ನು ಗ್ರಂಥಾಲಯವು ಯಾವಾಗಲೂ ಸ್ವಾಗತಿಸುತ ್ತದೆ.