librarian@kud.ac.in
0836-2215212 / 247
ಪ್ರೊ. ಶಿ.ಶಿ. ಬಸವನಾಳ ಗ್ರಂಥಾಲಯ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಸಾಮಾನ್ಯ ನಿಯಮಗಳು

  1. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಮುಂಚಿತವಾಗಿ ಅನುಮತಿ ಪಡೆದ ಅತಿಥಿ ಓದುಗರಿಗೆ ಗ್ರಂಥಾಲಯವನ್ನು ಉಪಯೋಗಿಸಲು ಅನುಮತಿ ಇರುತ್ತದೆ.

  2. ಗ್ರಂಥಾಲಯವನ್ನು ಉಪಯೋಗಿಸುವಾಗ ಓದುಗರು ಯಾವಾಗಲೂ ತಮ್ಮ ಗುರುತಿನ ಪತ್ರವನ್ನು ಹೊಂದಿರಬೇಕು.

  3. ಗ್ರಂಥಾಲಯ ಪ್ರವೇಶಿಸುವ ಮುನ್ನ ತಮ್ಮ ವೈಯಕ್ತಿಕ ವಸ್ತುಗಳನ್ನು ‘Property Counter' ನಲ್ಲಿ ಇರಿಸಬೇಕು ಮತ್ತು ಗ್ರಂಥಾಲಯ ಬಿಟ್ಟು ಹೋಗುವಾಗ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

  4. ವೈಯಕ್ತಿಕ ಪುಸ್ತಕಗಳನ್ನು ಗ್ರಂಥಾಲಯದ ಒಳಗಡೆ ತೆಗೆದುಕೊಂಡು ಹೋಗುವುದನ್ನು ನಿರ್ಭಂಧಿಸಲಾಗಿದೆ.

  5. ಓದುಗರು ಕೇವಲ ನೋಟ ಪುಸ್ತಕ ಅಥವಾ ಬಿಳಿ ಹಾಳೆಗಳನ್ನು ಮಾತ್ರ ಗ್ರಂಥಾಲಯದೊಳಗೆ ತೆಗೆದುಕೊಂಡು ಹೋಗಬಹುದು.

  6. P.G. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು 10 ದಿನಗಳ ವರೆಗೆ ಮತ್ತು ಸಿಬ್ಬಂದಿ ಹಾಗೂ ಪಿ.ಹೆಚ್‍ಡಿ ಹಾಗೂ ವಿದ್ಯಾರ್ಥಿಗಳಿಗೆ ಒಂದು ತಿಂಗಳವರೆಗೆ ಎರವಲು ನೀಡಲಾಗುವದು. ಎರವಲು ಪಡೆದ ಪುಸ್ತಕವನ್ನು ಸತತವಾಗಿ ಮೂರು ಬಾರಿ ಮಾತ್ರ ನವೀಕರಿಸಬಹುದು.

  7. ಎರವಲು ಅಂತಿಮ ದಿನಾಂಕದ ನಂತರ ಪುಸ್ತಕ ಮರಳಿಸಲು ತಡವಾದರೆ ಪ್ರತಿ ದಿನಕ್ಕೆ ಒಂದು ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.

  8. ಗ್ರಂಥಾಲಯವು ಓದುಗರಿಗೆ ಎರವಲು ನೀಡಿದ ಪುಸ್ತಕವನ್ನು ಯಾವುದೇ ದಿನವಾದರೂ ಮರಳಿಸುವಂತೆ ಆದೇಶಿಸಬಹುದಾಗಿದೆ.

  9. ಇಂಟರನೆಟ್ ಸೇವೆಯನ್ನು ಪ್ರತಿ ತಾಸಿಗೆ ರೂ. 5/- ಗಳನ್ನು ಪಾವತಿಸಿ ಪಡೆಯಬಹುದಾಗಿದೆ.

  10. ಓದುಗರಿಗೆ ನೀಡಿದ ಎರವಲು ಕಾರ್ಡನ್ನು ಒಂದು ವರ್ಷದ ವರೆಗೆ ನೀಡಲಾಗಿರುತ್ತದೆ ಹಾಗೂ ಮತ್ತೆ ಒಂದು ವರ್ಷ ನವೀಕರಿಸಿಕೊಳ್ಳಬಹುದಾಗಿದೆ. ಎರವಲು ಕಾರ್ಡನ್ನು ಬೇರೆಯವರಿಗೆ ವರ್ಗಾಯಿಸಲಾಗುವುದಿಲ್ಲ.

  11. ಓದುಗರು ಎರವಲು ಪಡೆದ ಪುಸ್ತಕವನ್ನು ಕಳೆದುಕೊಂಡಲ್ಲಿ ಪುಸ್ತಕದ ಮುಖ ಬೆಲೆಯ ಆರು ಪಟ್ಟು ಹಣವನ್ನು ಅಥವಾ ರೂ. 1000/- ಇದರಲ್ಲಿ ಅಧಿಕವಾದದ್ದನ್ನು ಪಾವತಿಸಬೇಕಾಗುತ್ತದೆ.

  12. ಗ್ರಂಥಾಲಯದಲ್ಲಿ ಶೆಲ್ಫಗಳಲ್ಲಿರುವ ಪುಸ್ತಕಗಳ ಅನುಕ್ರಮವನ್ನು ಬದಲಾಯಿಸಬಾರದು.

  13. ಬಳಕೆಯ ನಂತರ ಪುಸ್ತಕಗಳನ್ನು ಓದುವ ಟೇಬಲ್ ಮೇಲೆಯೆ ಬಿಡಬೇಕು.

  14. ಗ್ರಂಥಾಲಯದ ಪುಸ್ತಕದ ಮೇಲೆ/ನೆಲದ ಮೇಲೆ ಪೆನ್ನಿನ ಶಾಯಿ (Ink) ಯನ್ನು ಸಿಂಪಡಿಸಬಾರದು, ಅಡಿಕೆ/ತಂಬಾಕು ಉತ್ಪನ್ನಗಳನ್ನು ಜಗಿಯುವದು, ಉಗುಳುವದು, ಸೇದುವುದನ್ನು ಹಾಗೂ ಆಹಾರ ಪದಾರ್ಥಗಳನ್ನು ನಿರ್ಭಂದಿಸಲಾಗಿದೆ.

  15. ಗ್ರಂಥಾಲಯ ಮುಚ್ಚುವ 15 ನಿಮಿಷದ ಮೊದಲು ಮೊಳಗುವ ಎಚ್ಚರಿಕೆ ಗಂಟೆಯ ನಂತರ ಓದುಗರು ಗ್ರಂಥಾಲಯ ಬಿಟ್ಟು ಹೊರ ಹೋಗಬೇಕು.

  16. ಹೆಚ್ಚಿನ ಮಾಹಿತಿಗಾಗಿ ಗ್ರಂಥಾಲಯದ ಜಾಲತಾಣದಲ್ಲಿ ನೀಡಿರುವ ಈಂಕಿ ಭಾಗವನ್ನು ಸಂದರ್ಶಿಸುವುದು ಅಥವಾ ಖುದ್ದಾಗಿ ಗ್ರಂಥಾಲಯದ ಪರಿಚಲನಾ ವಿಭಾಗದ ಸಿಬ್ಬಂದಿಯನ್ನು ಭೆಟ್ಟಿಯಾಗಬೇಕು.





  0836-2215212
   librarian@kud.ac.in

University Librarian
Prof. S. S. Basavanal Library Karnatak University, Pavate Nagar Dharwad - 580003 Karnataka. India