librarian@kud.ac.in
0836-2215212 / 247
ಪ್ರೊ. ಶಿ.ಶಿ. ಬಸವನಾಳ ಗ್ರಂಥಾಲಯ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 ಪರಿಚಯ


ಗ್ರಂಥಾಲಯವು ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಾದ ವರ್ಷ 1950 ರಿಂದಲೇ ಪ್ರಾರಂಭವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ಮೊದಲು ಪುರುಷರ ಸರಕಾರಿ ಟ್ರೇನಿಂಗ್ ಕಾಲೇಜ, ಧಾರವಾಡದ ಕಟ್ಟಡದಲ್ಲಿ ಎಲ್ಲ ವಿಭಾಗಗಳ ಜೊತೆಗೆ ಗ್ರಂಥಾಲಯವು ಕೂಡ 1951 ರಲ್ಲಿ ಕಾರ್ಯಾರಂಭ ಮಾಡಿತು. ಗ್ರಂಥಾಲಯದ ಎಲ್ಲ ಮಾಹಿತಿ ಸಂಪನ್ಮೂಲಗಳನ್ನು ಮುಕ್ತ ದ್ವಾರ ಪದ್ಧತಿಯಲ್ಲಿ ಸ್ಥಾಪಿತವಾದಂದಿನಿಂದಲೇ ಓದುಗರಿಗೆ ಒದಗಿಸಿದೆ. ಪ್ರಸ್ತುತ ಗ್ರಂಥಾಲಯವು ತನ್ನದೇ ಆದ ಭವ್ಯ ಕಟ್ಟಡವನ್ನು ಹೊಂದಿದೆ. ಈ ಕಟ್ಟಡ ವಿಶ್ವವಿದ್ಯಾಲಯದ ಪಾರಂಪರಿಕ ಕಟ್ಟಡದ ಹಿಂಬಾಗದಲ್ಲಿ ಎತ್ತರವಾದ ನೆಲದಲ್ಲಿ ನೈಸರ್ಗಿಕ ಸಸ್ಯರಾಶಿಯ ನಡುವೆ ಕಂಗೊಳಿಸುತ್ತಿದೆ. ಪೆÇ್ರ.ಶಿ.ಶಿ. ಬಸವನಾಳ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣಕರ್ತರಲ್ಲಿ ಒಬ್ಬರು ಮತ್ತು ವಿಶ್ವವಿದ್ಯಾಲಯದ ಪ್ರಾರಂಭಿಕ ಸದಸ್ಯರು ಹಾಗೂ ಪುಸ್ತಕ ಪ್ರೀಯರೂ ಆಗಿದ್ದರು. ಅವರ ಸ್ಮರಣಾರ್ತವಾಗಿ 1994 ರಲ್ಲಿ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಪೆÇ್ರ. ಶಿ. ಶಿ. ಬಸವನಾಳ ಗ್ರಂಥಾಲಯ ಎಂದು ನಾಮಕರಣ ಮಾಡಲಾಯಿತು.

ವಿಶ್ವವಿದ್ಯಾಲಯದ ಗ್ರಂಥಾಲಯವು ಸುಮಾರು 50,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ನಾಲ್ಕು ಮಹಡಿಗಳಲ್ಲಿ ಸುಮಾರು 4 ಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಹೊಂದಿದೆ. ಸುಮಾರು 300 ವಿದ್ಯಾರ್ಥಿಗಳು ಕುಳಿತು ಓದುವ ಎರಡು ವಿಶಾಲವಾದ ಓದುವ ಕೊಠಡಿಗಳನ್ನು ಹೊಂದಿದೆ. 24/7 ತೆರೆದಿರುವ ಓದುವ ಕೊಠಡಿ ಹಾಗೂ ನಿಸರ್ಗದಲ್ಲಿ ಅಧ್ಯಯನ ಮಾಡಲು ಓದುವ ಕುಟಿರಗಳು ಗ್ರಂಥಾಲಯದ ವಿಶೇಷ ಸೌಲಭ್ಯಗಳಾಗಿವೆ.

ಪೆÇ್ರ.ಶಿ.ಶಿ. ಬಸವನಾಳ ಗ್ರಂಥಾಲಯವು ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ವಿವಿಧ ವಿಷಯಗಳ ಮೇಲೆ ವಿವಿದ ಮಾಹಿತಿ ಮೂಲಗಳಾದ ಪುಸ್ತಕಗಳು, ದತ್ತಾಂಶ ತಂತ್ರಾಂಶಗಳು, e-ನಿಯತಕಾಲಿಕೆಗಳು, e-ಪುಸ್ತಕಗಳು ಹಾಗೂ ಇತರ ಮುದ್ರಿತ ಮಾಹಿತಿಯ ಪರಿಕರಗಳೊಂದಿಗೆ ಶ್ರೀಮಂತವಾಗಿದೆ. ಗ್ರಂಥಾಲಯವು ಉನ್ನತ ಶಿಕ್ಷಣ ಹಾಗೂ ಸಂಶೋಧನೆಗಾಗಿ ವಿವಿಧ ಸೇವೆ ಹಾಗೂ ಸೌಲಭ್ಯಗಳನ್ನು ಒದಗಿಸಲು ಸದಾ ಪ್ರಯತ್ನಿಸುತ್ತಿದೆ.





  0836-2215212
   librarian@kud.ac.in

University Librarian
Prof. S. S. Basavanal Library Karnatak University, Pavate Nagar Dharwad - 580003 Karnataka. India