ಉದ್ದಿಷ್ಟಧ್ಯೇಯ:
ಗ್ರಂಥಾಲಯವು ಚಲನಶೀಲ ಮತ್ತು ರಚನಾತ್ಮಕ ಕಲಿಕೆಯ ಪರಿಸರವನ್ನೊದಗಿಸುವುದರ ಜೊತೆಗೆ ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನದ ಸದುಪಯೋಗದಿಂದ ಅವಿರತವಾಗಿ ಹೊರಹೊಮ್ಮುತ್ತಿರುವ ಜ್ಞಾನ ಹಾಗೂ ಮಾಹಿತಿಯೊಡನೆ ಸೀಮಾತೀತ ಸಂಪರ್ಕವನ್ನೊದಗಿಸಿ ಉನ್ನತ ಶಿಕ್ಷಣ ಹಾಗೂ ನವೀನ ಶೋಧನೆ ಮತ್ತು ಸಂಶೋಧನೆಗಳನ್ನು ಪ್ರೋತ್ಸಾಹಿಸುತ್ತಾ ನಾಡಿನ ಶ್ರೀಮಂತ ಸಾಂಸ್ಕöÈತಿಕ ಪರಂಪರೆಯನ್ನು ಮುದ್ರಿತ ಹಾಗೂ ವಿದ್ಯುನ್ಮಾನ ರೂಪದಲ್ಲಿ ಸಂರಕ್ಷಿಸುವುದಾಗಿದೆ.
ಕಾಣ್ಕೆ:
- ಉನ್ನತ ಮಟ್ಟದ ಮತ್ತು ಸಮಯೋಚಿತ ಪಠ್ಯಕ್ರಮಕ್ಕನುಗುಣವಾಗಿ ಮಾಹಿತಿ ಸಂಪನ್ಮೂಲ ಸಂಗ್ರಹವನ್ನು ವೃದ್ಧಿಸುವುದು.
- ಅವಶ್ಯ ಮಾಹಿತಿಯನ್ನು ಸರಳವಾಗಿ ಪಡೆಯುವ ಅನುಕೂಲಕರ ಸಾಧನ ಸಲಕರಣೆಗಳನ್ನು ಮತ್ತು ಓದುಗ-ಸ್ನೇಹಿ ಸೇವಾ ಸೌಲಭ್ಯಗಳನ್ನೊದಗಿಸುವುದು.
- ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಾಹಿತಿ ಸಂಪನ್ಮೂಲಗಳನ್ನು ಒಕ್ಕೂಟ ವ್ಯವಸ್ಥೆಯ ಮೂಲಕ ಸಂಪರ್ಕ ಸಾಧಿಸಿ ಪರಿಚಲನೆಗೊಳಿಸುವುದು.
- ವಿಶ್ವವಿದ್ಯಾಲಯದ ಸಮಗ್ರ ಸಂಶೋಧನಾ ಪ್ರಕಟಣೆಗಳ ಕೇಂದ್ರ ಸಂಗ್ರಹಾಗಾರವನ್ನು ಅಭಿವೃದ್ಧಿ ಪಡಿಸುವುದು.
- ಕಾಲಕಾಲಕ್ಕೆ ಯೋಜಿತ ಮಾಹಿತಿ ಸಾಕ್ಷರತೆಯ ಕಾರ್ಯಕ್ರಮಗಳನ್ನು ನಿಯೋಜಿಸಿ ಓದುಗ ಸಮೂಹದ ಮಾಹಿತಿ ಅನ್ವೇಷಣಾ ಕೌಶಲ್ಯವನ್ನು ಸಧೃಡಗೊಳಿಸುವುದು.